ಕ್ರೀಡೆ

ಹಂಗೇರಿಯ : ಕನಿಜ್ಸಾ ಓಪನ್–2026 ಪ್ರಶಸ್ತಿ ಗೆದ್ದ ಭಾರತದ ಗ್ರ್ಯಾಂಡ್‌ಮಾಸ್ಟರ್ ಪ್ರಾಣೇಶ್ ಎಂ

ನಾಗೈಕನಿಜ್ಸಾದಲ್ಲಿ ನಡೆದ ಪ್ರತಿಷ್ಠಿತ ಕನಿಜ್ಸಾ ಓಪನ್–2026 ಗ್ರ್ಯಾಂಡ್‌ಮಾಸ್ಟರ್ ಪ್ರಾಣೇಶ್ ಎಂ, ಹಂಗೇರಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಗ್ರೂಪ್ ಎ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗ್ರ್ಯಾಂಡ್‌ಮಾಸ್ಟರ್ ಪ್ರಾಣೇಶ್ ಎಂ, ಜರ್ಮನಿಯ ವಾಡಿಮ್ ಪೆಟ್ರೋವ್ಸ್ಕಿ ಅವರನ್ನು ಪರಾಭವಗೊಳಿಸಿದರು.

ತಮಿಳುನಾಡಿನ ಕಾರೈಕುಡಿಯವರಾದ ಪ್ರಾಣೇಶ್, ಒಂಬತ್ತು ಸುತ್ತುಗಳಲ್ಲಿ ಏಳು ಅಂಕಗಳನ್ನು ಗಳಿಸಿ, ಇತರ ಮೂವರು ಆಟಗಾರರೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡರು. ಇಸ್ರೇಲ್‌ನ ಓರ್ ಬ್ರಾನ್‌ಸ್ಟೈನ್, ಉಕ್ರೇನ್‌ನ ಆಂಡ್ರೇ ವೊಲೊಕಿಟಿನ್ ಮತ್ತು ಭಾರತದ ಕಾರ್ತಿಕ್ ವೆಂಕಟರಾಮನ್ ಅವರೊಂದಿಗೆ ಉತ್ತಮ ಟೈಬ್ರೇಕರ್ ಮೂಲಕ ಅವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಾಣೇಶ್ 2673 ರೇಟಿಂಗ್ ಹೊಂದಿದ್ದು, ಆಗಸ್ಟ್ 2026 ರ ಇತ್ತೀಚಿನ FIDE ಶ್ರೇಯಾಂಕದಲ್ಲಿ 44ನೇ ಸ್ಥಾನದಲ್ಲಿದ್ದಾರೆ.

Leave a Reply

Your email address will not be published. Required fields are marked *