ಕ್ರೀಡೆ

ಭಾರತ–ಅಫ್ಘಾನಿಸ್ತಾನ ಟಿ-20 ಸರಣಿಗೆ 15 ಸದಸ್ಯರ ಭಾರತ ತಂಡ ಪ್ರಕಟ; ಶ್ರೇಯಸ್ ಅಯ್ಯರ್ ನಾಯಕ

ಇದೇ 13ರಿಂದ 17ರವರೆಗೆ ನಡೆಯಲಿರುವ  ಭಾರತ – ಅಪ್ಘಾನಿಸ್ತಾನದ ವಿರುದ್ಧದ ಮೂರು ಅಂತಾರಾಷ್ಟ್ರೀಯ ಟಿ-20  ಕ್ರಿಕೆಟ್ ಪಂದ್ಯಗಳಿಗೆ 15 ಸದಸ್ಯರ  ಭಾರತ ತಂಡ ಪ್ರಕಟಿಸಿದೆ.  

ಭಾರತ ತಂಡವನ್ನು ಶ್ರೇಯಸ್ ಅಯ್ಯರ್  ನಾಯಕನಾಗಿ ಮುನ್ನಡೆಸಲಿದ್ದು,  ತಿಲಕ್ ವರ್ಮ ಅವರನ್ನು ಉಪನಾಯಕರನ್ನಾಗಿ  ಆಯ್ಕೆ ಮಾಡಲಾಗಿದೆ. ಜಸ್ಪ್ರೀತ್ ಬೂಮ್ರಾ ಮರಳಿ  ತಂಡಕ್ಕೆ ಆಯ್ಕೆಯಾಗಿದ್ದಾರೆ.  11ರ ಬಳಗದಲ್ಲಿ ಆಡುವುದು  ಅವರ ದೈಹಿಕ ಸದೃಢತೆ ಪ್ರಮಾಣಪತ್ರದ ಆಧಾರದ ಮೇಲೆ ಅವಲಂಬಿತವಾಗಿದೆ.

ಪಂದ್ಯಗಳು ಸೆಪ್ಟೆಂಬರ್ 13, 15, ಮತ್ತು 17ರಂದು  ಟಿ-20 ಪಂದ್ಯ ದೆಹಲಿಯ  ಅರುಣ್ ಜೇಟ್ಲಿ  ಕ್ರೀಡಾಂಗಣದಲ್ಲಿ ನಡೆಯಲಿದ್ದು,

ಭಾರತ ತಂಡ  ಯುವ ಮತ್ತು  ಅನುಭವಿಗಳ ಮಿಶ್ರಣ ಹೊಂದಿದೆ.

ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮ,  ಸಂಜು ಸ್ಯಾಮ್ಸನ್,  ಕಿಶನ್, ಆರಂಭಿಕ ಆಟಗಾರರಾಗಿ  ತಂಡಕ್ಕೆ ಬೆನ್ನಲುಬಾಗಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ  ನಾಯಕ ಶ್ರೇಯಸ್  ಅಯ್ಯರ್ , ಉಪನಾಯಕ ತಿಲಕ್ ವರ್ಮ, ಶಿವಂ ದುಬೆ, ಆಲ್ ರೌಂಡರ್ ಗಳ ಪೈಕಿ ನಿತೇಶ್ ಕುಮಾರ್  ರೆಡ್ಡಿ, ಅಕ್ಸರ್ ಪಟೇಲ್ , ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ ಹಾಗೂ  ಸ್ಪಿನ್ ವಿಭಾಗದಲ್ಲಿ  ರವಿ ಬಿಷ್ಣೋಯ್, ವೇಗದ  ಬೌಲಿಂಗ್ ದಾಳಿಯಲ್ಲಿ ಜಸ್ಪ್ರೀತ್ ಬೂಮ್ರಾ, ಅರ್ಷ ದೀಪ್ ಸಿಂಗ್, ಹರ್ಷಿತ್ ರಾಣಾ  ತಂಡಕ್ಕೆ ಬಲ ನೀಡಲಿದ್ದಾರೆ. ಈ  ಮೂಲಕ ಭಾರತದ ಯುವ ಮತ್ತು ಅನುಭವಿಗಳನ್ನೊಳಗೊಂಡ ಭಾರತ ತಂಡವು ಉತ್ತಮ ಪ್ರದರ್ಶನ ನೀಡಲಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *