ರಾಷ್ಟ್ರ

ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಕ್ಲೋರ್ಫೆನಿರಾಮೈನ್–ಫಿನೈಲ್ಫ್ರಿನ್‌ ಹೊಂದಿರುವ ಕೆಮ್ಮಿನ ಔಷಧ ನಿಷೇಧ

ಕ್ಲೋಫರ್ ನಿ ರಾಮೈನ್ ಮತ್ತು ಫಿನಾಯಲ್ಡ್ರಿನ್ ಹೈಡ್ರೋ ಕ್ಲೋರೈಡ್ ಹೊಂದಿರುವ ಕೆಮ್ಮಿನ ಔಷಧಿಗಳನ್ನು ನಾಲ್ಕು ವರ್ಷದೊಳಗಿನ ಮಕ್ಕಳಿಗೆ ನೀಡುವುದನ್ನು ಸರ್ಕಾರ ನಿಷೇಧಿಸಿದೆ.

ಈ ಔಷಧಗಳ ಮೇಲೆ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಳಸುವಂತಿಲ್ಲ ಎಂಬ ಎಚ್ಚರಿಕೆಯ ಲೇಬಲ್ ಅಂಟಿಸುವಂತೆ ಎಲ್ಲ ಔಷಧ ತಯಾರಿಕಾ ಕಂಪನಿಗಳಿಗೆ ಆರೋಗ್ಯ ಸಚಿವಾಲಯವು ಸ್ಪಷ್ಟ ಸೂಚನೆ ನೀಡಿದೆ.

ಈ ಕೆಮ್ಮಿನ ಔಷಧಗಳಲ್ಲಿರುವ ಎರಡೂ ರಾಸಾಯನಿಕಗಳು ಮಕ್ಕಳ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟು ಮಾಡುವ ಸಾಧ್ಯತೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಕಳೆದ ವರ್ಷದ ಜೂನ್‌ನಲ್ಲಿ ಸರ್ಕಾರವು ಎಫ್‌ಡಿ‌ಸಿ ಔಷಧಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿತ್ತು. ತಜ್ಞರ ಸಮಿತಿ ಮತ್ತು ತಾಂತ್ರಿಕ ಸಲಹಾ ಮಂಡಳಿಯ ಶಿಫಾರಸ್ಸುಗಳ ಅನುಸಾರ ಈ ಕ್ರಮ ಕೈಗೊಂಡಿರುವುದಾಗಿ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

Chlorpheniramine Maleate + Phenylephrine Hydrochloride. ಕೇಂದ್ರ ಸರ್ಕಾರದ 15 ಏಪ್ರಿಲ್ 2025ರ ಅಧಿಸೂಚನೆಯಲ್ಲಿ ಈ ಸಂಯೋಜನೆಯ ಎಲ್ಲಾ formulation‌ಗಳನ್ನು 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಬಳಸಬಾರದು ಎಂದು ನಿರ್ಬಂಧಿಸಲಾಗಿದೆ. ಇದು ಸಂಪೂರ್ಣ ಔಷಧವನ್ನು ಎಲ್ಲ ವಯೋಮಾನದವರಿಗೂ ನಿಷೇಧಿಸಿರುವ ಕ್ರಮವಲ್ಲ. ನಿರ್ಬಂಧದ ಕೇಂದ್ರಬಿಂದು 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಳಕೆ ಆಗಿದೆ. ತಯಾರಕರು ಔಷಧದ ಲೇಬಲ್, ಪ್ಯಾಕೇಜ್ ಇನ್‌ಸರ್ಟ್ ಅಥವಾ ಪ್ರಚಾರ ಸಾಹಿತ್ಯದಲ್ಲಿ ಈ ಎಚ್ಚರಿಕೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಈ ನಿರ್ಧಾರಕ್ಕೂ ಮುನ್ನ Subject Expert Committee ವಿಷಯವನ್ನು ಪರಿಶೀಲಿಸಿ, 4 ವರ್ಷದೊಳಗಿನ ಮಕ್ಕಳಲ್ಲಿ ಈ FDC ಬಳಸಬಾರದು ಎಂದು ಶಿಫಾರಸು ಮಾಡಿತ್ತು. ನಂತರ Drugs Technical Advisory Board (DTAB) ಕೂಡ ಇದೇ ರೀತಿಯ ನಿರ್ಬಂಧಕ್ಕೆ ಶಿಫಾರಸು ಮಾಡಿತ್ತು. ಸರ್ಕಾರದ ಅಧಿಸೂಚನೆಯ ಪ್ರಕಾರ, ಈ ಔಷಧ ಸಂಯೋಜನೆಯ ಬಳಕೆಯಿಂದ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಮತ್ತು ಇದಕ್ಕೆ ಹೆಚ್ಚು ಸುರಕ್ಷಿತ ಪರ್ಯಾಯಗಳು ಲಭ್ಯವಿವೆ ಎಂಬುದನ್ನೂ ಪರಿಗಣಿಸಲಾಗಿದೆ. ಈ ವಿಷಯದ ಬಗ್ಗೆ CDSCO 18 ಡಿಸೆಂಬರ್ 2023ರಲ್ಲೇ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಪತ್ರ ಬರೆದು, ಸಂಬಂಧಿತ FDCಯ ಲೇಬಲ್ ಮತ್ತು ಪ್ಯಾಕೇಜ್ ಇನ್‌ಸರ್ಟ್‌ನಲ್ಲಿ 4 ವರ್ಷದೊಳಗಿನ ಮಕ್ಕಳಿಗೆ ಬಳಸಬಾರದು ಎಂಬ ಎಚ್ಚರಿಕೆ ಸೇರಿಸುವಂತೆ ಸೂಚಿಸಿತ್ತು. 2024ರ DTAB ಸಭೆಯಲ್ಲೂ ಇದೇ ವಿಷಯವನ್ನು ಚರ್ಚಿಸಲಾಗಿತ್ತು. ವಿವಿಧ formulation‌ಗಳಿಗೆ ಈ ಎಚ್ಚರಿಕೆ ಅನ್ವಯಿಸಬೇಕೇ ಎಂಬ ಪ್ರಶ್ನೆಯನ್ನು ಪರಿಶೀಲಿಸಿ, ತಜ್ಞರು ಮತ್ತು ಮಕ್ಕಳ ವೈದ್ಯರ ಅಭಿಪ್ರಾಯಗಳನ್ನು ಪರಿಗಣಿಸಲಾಗಿತ್ತು.

Leave a Reply

Your email address will not be published. Required fields are marked *