ಮೈಸೂರಿನಲ್ಲಿ ದೇಶದ ಮೊದಲ ಎಲ್‌ಇಡಿ ಡೋಮ್ ಕಾಸ್ಮೋಸ್ ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಜ್ಞಾನ ಮತ್ತು ಸಂಶೋಧನೆಗೆ ಒತ್ತು
ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಎಲ್.ಇ.ಡಿ ಡೋಮ್ ಕಾಸ್ಮೋಸ್-ಮೈಸೂರು ತಾರಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಈ ಕುರಿತು ಮಾತನಾಡಿದ ಪ್ರಧಾನಿ, ನಮ್ಮ ಪೂರ್ವಜರು ಬಾಹ್ಯಾಕಾಶವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದರು, ಗ್ರಹ, ನಕ್ಷತ್ರಗಳ ಚಲನೆಯನ್ನು ಅರಿತು ಕ್ಯಾಲೆಂಡರ್ ರೂಪಿಸಿದ್ದರು. ಸೂರ್ಯ ಮತ್ತು ಚಂದ್ರ ಗ್ರಹಣಗಳ ಸಮಯವನ್ನು ಲೆಕ್ಕಾಚಾರ ಮಾಡುವುದರಲ್ಲಿ ನಿಪುಣರಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿಶ್ವ ವಿದ್ಯಾಲಯ ಸ್ಧಾಪನೆ ಮತ್ತು ಬೆಂಗಳೂರಿನ ಐಐಎಸ್ ಸಿ ನಿರ್ಮಾಣಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಭಾರತದ ಬಾಹ್ಯಾಕಾಶ ವಿಷನ್ ಮಾನವಿಯತೆಯ ಕಲ್ಯಾಣಕ್ಕೆ ಬದ್ಧವಾಗಿದೆ. ಉಪಗ್ರಹಗಳಿಂದ ವಿಪತ್ತು ಮುನ್ನೆಚ್ಚರಿಕೆ ಸೇರಿದಂತೆ , ರೈಲು ಗಳ ಸಂಚಾರದ ಕುರಿತು ನಿಖರ ಮಾಹಿತಿ ಲಭ್ಯವಾಗುತ್ತಿದೆ. ಬೆಳೆ ವಿಮೆ ಯೋಜನೆಯಲ್ಲಿಯೂ ಉಪಗ್ರಹ ಆಧಾರಿತ ಮಾಹಿತಿಯನ್ನು ಬಳಕೆ ಮಾಡಲಾಗುತ್ತಿದ್ದು, ಸಮಾಜಕ್ಕಾಗಿ ವಿಜ್ಞಾನ ಬಳಕೆಯಾಗಬೇಕು ಎನ್ನುವುದು ನಮ್ಮ ಚಿಂತನೆಯಾಗಿದೆ. ವಿಜ್ಞಾನ ಮತ್ತು ಸಂಶೋಧನೆಗೆ ಪೂರಕವಾದ ಸದೃಢ ಪರಿಸರ ವ್ಯವಸ್ದೆ ದೇಶದಲ್ಲಿ ರೂಪುಗೊಂಡಿದೆ ಎಂದರು.

