ಕ್ರೀಡೆ

ಭಾರತ 5 ವಿಕೆಟ್‌ಗೆ 300 ರನ್: ಕೊಲಂಬೊ ಟೆಸ್ಟ್‌ನ ಮೊದಲ ದಿನದಾಟ ಅಂತ್ಯ

ಶ್ರೀಲಂಕಾದ ಕೊಲಂಬೊದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ 2ನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 5 ವಿಕೆಟ್ ನಷ್ಟಕ್ಕೆ 300 ರನ್ ಮಾಡಿ ನಾಳೆಗೆ ಆಟ ಕಾಯ್ದಿರಿಸಿದೆ. ಭಾರತ ಉತ್ತಮ ಸ್ಥಿತಿಯಲ್ಲಿದೆ.

ಭಾರತದ ಪರ ದೇವದತ್ ಪಡಿಕಲ್ 117, ಶುಭ್ ಮನ್ ಗಿಲ್ 50, ಯಶಸ್ವಿ ಜೈಸ್ವಾಲ್ 45 ಹಾಗೂ ರವೀಂದ್ರ ಜಡೇಜ 43 ರನ್ ಗಳಿಸಿ ಔಟಾದರು.

ಧೃವ್ ಜುರೇಲ್ 7 ಹಾಗೂ ಸರಾಂಶ್ ಜೈನ್ 4 ರನ್ ಗಳಿಸಿ ಕ್ರೀಸ್ ನಲ್ಲಿದ್ದು, ನಾಳೆ ಆಟ ಮುಂದುವರಿಸಲಿದ್ದಾರೆ.

ಶ್ರೀಲಂಕಾ ಪರ ಅಸಿತ ಫರ್ನಾಂಡೋ 3 ಮತ್ತು ಲಹಿರು ಕುಮಾರ ಮತ್ತು ಕೇಶರ ನುವಾಂತ ತಲಾ 1 ವಿಕೆಟ್‌ ಪಡೆದರು.

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 165 ರನ್‌ಗಳಿಂದ ಗೆದ್ದು, ಪ್ರಸ್ತುತ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ.

ಭಾರತ ತಂಡ ಎರಡನೇ ಟೆಸ್ಟ್ ಅನ್ನು ಗೆದ್ದು 2-0 ಯಿಂದ ಸರಣಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದು, ಶ್ರೀಲಂಕಾ ಈ ಪಂದ್ಯವನ್ನು ಗೆದ್ದು, ಸರಣಿಯನ್ನು ಸಮಬಲಗೊಳಿಸುವ ಗುರಿಯನ್ನು ಹೊಂದಿದೆ

ದೇವದತ್ ಪಡಿಕಲ್ ಅವರ ಸತತ ಎರಡನೇ ಶತಕ: ಪಡಿಕಲ್ 193 ಎಸೆತಗಳಲ್ಲಿ 117 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳಿದ್ದವು. ಇದು ಶ್ರೀಲಂಕಾ ಪ್ರವಾಸದಲ್ಲಿ ಅವರ ಸತತ ಎರಡನೇ ಟೆಸ್ಟ್ ಶತಕವಾಗಿದೆ.

ದೇವದತ್ ಪಡಿಕಲ್ ಅವರ ಸತತ ಎರಡನೇ ಶತಕ: ಪಡಿಕಲ್ 193 ಎಸೆತಗಳಲ್ಲಿ 117 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳಿದ್ದವು. ಇದು ಶ್ರೀಲಂಕಾ ಪ್ರವಾಸದಲ್ಲಿ ಅವರ ಸತತ ಎರಡನೇ ಟೆಸ್ಟ್ ಶತಕವಾಗಿದೆ.

ತಂಡದಲ್ಲಿ ಬದಲಾವಣೆ: ಭಾರತ ಮೊದಲ ಟೆಸ್ಟ್‌ನ ತಂಡದಿಂದ ಒಂದು ಬದಲಾವಣೆ ಮಾಡಿದ್ದು, ಕುಲದೀಪ್ ಯಾದವ್ ಬದಲಿಗೆ ಸರಾಂಶ್ ಜೈನ್ ಅವರನ್ನು ಆಡಿಸಿದೆ. ಸರಾಂಶ್ ಅವರಿಗೆ ಇದು ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆಯಾಗಿದೆ.

Leave a Reply

Your email address will not be published. Required fields are marked *