ಸಾಮಾನ್ಯ.

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ: ಗುಲಾಬಿ ಬೆಳಕಿನಲ್ಲಿ ಕಂಗೊಳಿಸಿದ ರಾಜ್ಯದ ಪ್ರಮುಖ ತಾಣಗಳು

ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ 2023ರ ಆಗಸ್ಟ್ 30ರಂದು ಜಾರಿಯಾಗಿ ಇಂದಿಗೆ 3 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಬೆಳಗಾವಿಯ ಸುವರ್ಣಸೌಧ ಸೇರಿ ರಾಜ್ಯದ ಹಲವು ಪ್ರಮುಖ ಐತಿಹಾಸಿಕ ಕಟ್ಟಡಗಳು ಹಾಗೂ ಪ್ರವಾಸಿ ತಾಣಗಳನ್ನು ಗಲಾಬಿ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಈ ಯೋಜನೆಯಿಂದ ರಾಜ್ಯದ ಸುಮಾರು 1.20 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ₹76,500 ಕೋಟಿಗೂ ಅಧಿಕ ಮೊತ್ತ ಪಾವತಿಸಲಾಗಿದ್ದು,
ಫಲಾನುಭವಿಗಳ ಸಂಖ್ಯೆ 1.24 ಕೋಟಿ ಮತ್ತು ಒಟ್ಟು ಪಾವತಿ ₹76,951 ಕೋಟಿ ಎಂದು ತಿಳಿಸಲಾಗಿದೆ.

.
ಈ ವಿಶೇಷ ಪಿಂಕ್ ಲೈಟಿಂಗ್ ಆಗಸ್ಟ್ 30ರಂದು ಸಂಜೆ 6ರಿಂದ ರಾತ್ರಿ 10ರವರೆಗೆ ನಡೆಯಲಿದೆ ಎಂದು ವರದಿಯಾಗಿದೆ
ಗುಲಾಬಿ ಬಣ್ಣವನ್ನು ಇಲ್ಲಿ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಹೆಮ್ಮೆಯ ಸಂಕೇತವಾಗಿ ಬಳಸಲಾಗಿದೆ. ಅಂದರೆ, ಯೋಜನೆಯ ಮೂರು ವರ್ಷಗಳ ಪಯಣವನ್ನು ಕೇವಲ ಸರ್ಕಾರಿ ಯೋಜನೆಯ ವಾರ್ಷಿಕೋತ್ಸವವಾಗಿ ಮಾತ್ರವಲ್ಲದೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆಯೊಂದಿಗೆ ಗುರುತಿಸುವ ಪ್ರಯತ್ನವಾಗಿದೆ.

ವಿಧಾನಸೌಧ ಮತ್ತು ಸುವರ್ಣ ವಿಧಾನಸೌಧದ ಜೊತೆಗೆ:
• ಮೈಸೂರು ಅರಮನೆ
• ಚಿತ್ರದುರ್ಗದ ಕಲ್ಲಿನ ಕೋಟೆ
• ಹಂಪಿಯ ಕಲ್ಲಿನ ರಥ
• ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ
• ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತ
ಮುಂತಾದ ಸ್ಥಳಗಳಲ್ಲೂ ಗುಲಾಬಿ ಬಣ್ಣದ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ

Leave a Reply

Your email address will not be published. Required fields are marked *