ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
31ರಂದು ಉತ್ತಾರಾರಾಧನೆ ಜರುಗಲಿದ್ದು, ವಸಂತೋತ್ಸವ ಹಾಗೂ ಮಠದ ರಥಬೀದಿಯಲ್ಲಿ ರಾಯರ ರಥೋತ್ಸವ ಜರುಗಲಿದೆ.ಸೆಪ್ಟೆಂಬರ್ 1ರಂದು ಸುಜ್ಞಾನೇಂದ್ರ ತೀರ್ಥರ ಆರಾಧನಾ ಮಹೋತ್ಸವ ಜರುಗಲಿದೆ.
ಕೊನೆಯ ದಿನವಾದ ಸೆಪ್ಟೆಂಬರ್ 2ರಂದು ಸರ್ವ ಸಮರ್ಪಣ ಮಹೋತ್ಸವದೊಂದಿಗೆ ಆರಾಧನಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.ಅರ್ಚಕರೊಬ್ಬರು ಪ್ರತಿಕ್ರಿಯಿಸಿ, ಇಂದು ಮಧ್ಯಾರಾಧನೆ ನಡೆದಿದ್ದು, ರಾಯರ ಮಠದಲ್ಲಿ ಸಂಗೀತದ ಮೂಲಕ ಸೇವೆ ಸಲ್ಲಿಸಲಾಯಿತು. ರಾಯರಿಗೆ ವೀಣೆ ಪ್ರಿಯವಾಗಿದ್ದರಿಂದ ವೀಣಾಲಂಕಾರ ಮಾಡಲಾಗಿದೆ ಎಂದು ತಿಳಿಸಿದರು.
