ಪ್ರಧಾನಿ ಮೋದಿ ಅವರಿಂದ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ವೇಗ: 4 ರೈಲು ನಿಲ್ದಾಣಗಳ ಲೋಕಾರ್ಪಣೆ, ವಂದೇ ಭಾರತ್ ರೈಲಿಗೆ ಚಾಲನೆ
ಅಮೃತ್ ಭಾರತ್ ಯೋಜನೆಯಡಿ , ಮರು ಅಭಿವೃದ್ಧಿ ಪಡಿಸಲಾದ ಚಾಮರಾಜನಗರ, ಚಿಕ್ಕಮಗಳೂರು , ಸಕಲೇಶಪುರ ಮತ್ತು ಸುಬ್ರಮಣ್ಯರೋಡ್ ರೈಲ್ವೆ ನಿಲ್ದಾಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಬೆಂಗಳೂರು – ಮಂಗಳೂರು – ಮಡಗಾಂವ್ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದರು. ಅಷ್ಟೇ ಅಲ್ಲದೆ, 45 ಕಿಲೋಮೀಟರ್ ಉದ್ದದ ಬಾಗಲಕೋಟೆ -ವಂದಾಲ್ ರೈಲ್ವೆ ಮಾರ್ಗದ ದ್ವಿಪಥ, 55 ಕಿಲೋಮೀಟರ್ ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ರೈಲು ಮಾರ್ಗ ವಿದ್ಯುದೀಕರಣ ಸೇವೆಗೆ ಚಾಲನೆ ನೀಡಿದರು. ಮಂಗಳೂರಿನಲ್ಲಿ ನಿರ್ಮಿಸಲಾಗಿರುವ ದೇಶದ ಅತಿದೊಡ್ಡ , 80 ಸಾವಿರ ಟನ್ ಸಾಮರ್ಥ್ಯದ ಭೂಗತ ಎಲ್ ಪಿಜಿ ಶೇಖರಣಾ ಘಟಕವನ್ನು ಲೋಕಾರ್ಪಣೆ ಮಾಡಿದರು
