ಉದ್ಯೋಗ

RRB JE 2026 ನೇಮಕಾತಿ: 4,029 ಹುದ್ದೆಗಳಿಗೆ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 13 ಕೊನೆಯ ದಿನ

ರೈಲ್ವೆ ನೇಮಕಾತಿ ಮಂಡಳಿಗಳು (RRBs) CEN ಸಂಖ್ಯೆ 04/2026 ಅಡಿಯಲ್ಲಿ ಜೂನಿಯರ್ ಎಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS) ಮತ್ತು Corrigendum-1 ಮೂಲಕ ಹೊಸದಾಗಿ ಸೇರಿಸಲಾದ ಕೆಮಿಕಲ್ & ಮೆಟಲರ್ಜಿಕಲ್ ಅಸಿಸ್ಟೆಂಟ್ (CMA) ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿವೆ.

ಒಟ್ಟು 4,029 ಹುದ್ದೆಗಳು ಖಾಲಿ ಇವೆ. ಇದರಲ್ಲಿ ಮೂಲ ಅಧಿಸೂಚನೆಯ 3,993 ಹುದ್ದೆಗಳು ಹಾಗೂ ತಿದ್ದುಪಡಿ ಅಧಿಸೂಚನೆಯ ಮೂಲಕ ಹೆಚ್ಚುವರಿಯಾಗಿ ಸೇರಿಸಲಾದ 36 ಹುದ್ದೆಗಳು ಸೇರಿವೆ.

ಅರ್ಜಿ ಸಲ್ಲಿಸುವ ಅವಧಿ:
14 ಆಗಸ್ಟ್ 2026 ರಿಂದ 13 ಸೆಪ್ಟೆಂಬರ್ 2026ರ ರಾತ್ರಿ 11:59 ಗಂಟೆಯವರೆಗೆ

ಅರ್ಹ ಅಭ್ಯರ್ಥಿಗಳು rrbapply.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Leave a Reply

Your email address will not be published. Required fields are marked *